Hot Posts

6/recent/ticker-posts

180 ದಿನಗಳೊಳಗೆ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರ ತಯಾರಿ?

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ

ಹಸಿ ಅಡಿಕೆಯನ್ನು ಸುಲಿದಾಗ ಅಥವಾ ಚಾಲಿ ಅಡಿಕೆಯನ್ನು ಒಣ ಅಡಿಕೆಯಿಂದ ಬೇರ್ಪಡಿಸಿದಾಗ ಬಹಳ ಪ್ರಮಾಣದ ಅಡಿಕೆ ಸಿಪ್ಪೆಯ ರಾಶಿ ನಿರ್ಮಾಣವಾಗುತ್ತದೆ. ಒಂದು ಹೆಕ್ಟೇ‌ರ್ ಪ್ರದೇಶದಲ್ಲಿ 1.75 ರಿಂದ 2.00 ಟನ್ ಗಳಷ್ಟು ಅಡಿಕೆ ಸಿಪ್ಪೆ ಲಭ್ಯವಿರುತ್ತದೆ. ಈ ತ್ಯಾಜ್ಯ ವಸ್ತುಗಳ ಮಹತ್ವವನ್ನು ಅರಿಯದೆ ರಸ್ತೆಯ ಬದಿಯ ಖಾಲಿ ಜಾಗದಲ್ಲಿ ಸುರಿಯಲಾಗುತ್ತಿದ್ದು ನಂತರ ಬೆಂಕಿ ಹಾಕಿ ಸುಡಲಾಗುತ್ತದೆ. ಇದರಿಂದ ತ್ಯಾಜ್ಯ ವಿಲೇವಾರಿಯೂ ಸರಿಯಾಗಿ ಆಗದೆ ವಾಯು ಮತ್ತು ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.

ದೀಪಾವಳಿ ದಿನ ಹೆಗಡೆಕಟ್ಟಾ ಹೈಸ್ಕೂಲ್ ಆವಾರದಲ್ಲಿ ಮರಿಯಜ್ಜನ ಮನೆ ಕುಟುಂಬದವರ ಸ್ಮರಣಾರ್ಥ ಉಚಿತ ಯಕ್ಷಗಾನ 

'ಅಡಿಕೆ ಸಿಪ್ಪೆಯು ಕಳೆಯದಿರಲು ಪ್ರಮುಖ ಕಾರಣ

ಹೆಚ್ಚಾಗಿರುವ ಇಂಗಾಲ ಮತ್ತು ಸಾರಜನಕದ ಅನುಪಾತ, ಹೆಚ್ಚಾಗಿರುವ ಅಗ್ನಿನ್ (35-40%), ಸೆಲ್ಲುಲೂಸ್ (38-40%), ಮತ್ತು ಹೆಮಿ ಸೆಲ್ಲುಲೋಸ್ (17-18%). ಈ ಕಾರಣದಿಂದ ಅಡಿಕೆ ಸಿಪ್ಪೆಯು ಕಳೆಯಲು ಎರಡು ವರ್ಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.

ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ನಡೆಸಿದ ಸಂಶೋಧನೆಯಿಂದ ಕಡಿಮೆ ಅವಧಿಯಲ್ಲಿ (150 ರಿಂದ 180 ದಿನ)ಸೂಕ್ಷ್ಮಾಣು ಜೀವಿಗಳನ್ನು ಬಳಸಿ ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ವಿಧಾನವನ್ನು ಅಭಿವೃದ್ಧಿ ಪಡಿಸಲಾಗಿದೆ.

ಕಾಂಪೋಸ್ಟ್ ಕಲ್ಟರ್ :

ಇದು ಎರಡು ಅಥವಾ ಮೂರು ಸೂಕ್ಷ್ಮಾಣು ಜೀವಿಗಳ ಮಿಶ್ರಣದಿಂದ ಕೂಡಿದ ಜೈವಿಕ ಕಲ್ಟರ್ ಆಗಿದ್ದು ಅಡಿಕೆ ಸಿಪ್ಪೆಯನ್ನು ಕಳೆಯಲು ತುಂಬಾ ಉಪಯೋಗಕಾರಿಯಾಗಿದೆ. ಅಡಿಕೆ 'ಸಿಪ್ಪೆಯಿಂದ ತಯಾರಿಸಿದ ಗೊಬ್ಬರದಲ್ಲಿ ಪೊಟ್ಯಾಷ್ ಅಂಶವು ಹೆಚ್ಚಾಗಿದ್ದು ಮತ್ತು ಇತರೆ ಎಲ್ಲಾ ಅಂಶಗಳು ಉತ್ತಮ ಗುಣಮಟ್ಟದಲ್ಲಿವೆ.

ಈ ಚಿತ್ರದಲ್ಲಿರುವಂತೆ ಹಂತ ಗಳನ್ನು ಮಾಡಬೇಕು 

ಮೊದಲು ಒಂದು ಲೇಯರ್ ಸಗಣಿ ಹಾಕಬೇಕು. ಎರಡನೆಯ ಹಂತದಲ್ಲಿ ಕಾಂಪೋಸ್ಟ್ ಜೀವಾಣು, ಮೂರನೇಯ ಲೇಯರ್ ನಲ್ಲಿ ಅಡಿಕೆ ಸಿಪ್ಪೆ, ನಾಲ್ಕನೆಯ ಲೇಯರ್ ನಲ್ಲಿ ಕೆಮ್ಮಣ್ಣು, ಐದನೆಯ ಲೇಯರ್ ನಲ್ಲಿ ಅಡಿಕೆ ಎಲೆ, ಮತ್ತೆ ಮೇಲ್ಗಡೆ ಸಗಣಿಯ ಪದರ 

ಆರರಿಂದ ಏಳು ತಿಂಗಳು ಬಿಟ್ರೆ ಅವಾಗವಾಗ ಅದನ್ನು ಮಿಕ್ಸ್ ಮಾಡುತ್ತಾ ಇರಬೇಕು. ಲೈಟ್ ಆಗಿ ಸಣ್ಣಗೆ ಒಂದು ಸ್ಪ್ರಿಂಕಲ್ ಅಲ್ಲಿ ಒಂದು ನೀರು ಕೊಡುತ್ತಾ ಇರಬೇಕು 18 ತಿಂಗಳಲ್ಲಿ ಒಳ್ಳೆಯ ಕಾಂಪೋಸ್ಟ್ ಗೊಬ್ಬರ ತಯಾರಿ ಮಾಡಬಹುದು.

ಪ್ರತಿಕ್ರಿಯೆ

Post a Comment

0 Comments